ಬೆಂಗಳೂರು ನಗರದ ಹೊಸಕೆರೆ ಹಳ್ಳಿಯ ಸಪ್ತಗಿರಿ ಲೇಔಟ್ ನಲ್ಲಿ ಶ್ರೀಮತಿ ಪ್ರತಿಮಾ ಸುಭಾಶ್ ಅವರ ಮನೆಯಲ್ಲಿ ನಿನ್ನೆ ಸಂಜೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಬೆಂಗಳೂರು ಮಹಾನಗರ ಜಿಲ್ಲಾ ಘಟಕ ಮತ್ತು ಮಹಿಳಾ ಪ್ರಕಾರ ಕೂಡಿ ಹಮ್ಮಿ ಕೊಂಡಿದ್ದ ವ್ಯಾಸ ಪೂಜೆ ಹಾಗೂ ನಾಡಿನ ಖ್ಯಾತ ಹಾಸ್ಯ ಸಾಹಿತಿ ಹಾಗೂ ಪರಿಷತ್ತಿನ ಮಹಾನಗರದ ಅಧ್ಯಕ್ಷರಾದ ಎಂ ಎಸ್ ನರಸಿಂಹಮೂರ್ತಿ ಯವರೊಂದಿಗೆ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮ ಬಹಳ ಅದ್ಭುತವಾಗತ್ತು. ಮಾತನಾಡುತ್ತಾ ವ್ಯಾಸರು ರಚಿಸಿದ ವೇದ ಹಾಗೂ ಅವರು ಹೇಗೆ ಗುರು ಸ್ಥಾನದಲ್ಲಿ ಪ್ರಸ್ತುತ ರಾಗುತ್ತಾರೆ, ಗುರು ದೇವರಿಗಿಂತಲೂ ಪ್ರತ್ಯಕ್ಷವಾಗಿ ಉಪಯುಕ್ತರಾಗುತ್ತಾರೆ ಎಂಬುದನ್ನು ತಮ್ಮ ಹಾಸ್ಯ ಲಹರಿಯ ಮುಖಾಂತರ ಪ್ರಸ್ತುತಪಡಿಸಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಪರಿಷತ್ತಿನ ಮಹಿಳಾ ಪ್ರಕಾರದ ಉಪಾಧ್ಯಕ್ಷರಾದ ಶ್ರೀಮತಿ ಮೃದುಲಾ ವಿಜಯೀಂದ್ರರವರು ಉಪಸ್ಥಿತರಿದ್ದರು, ವಿಶೇಷ ಅಹ್ವಾನದ ಮೇರೆಗೆ ನಾಡಿನ ಹಾಸ್ಯ ಸಾಹಿತಿ ವೈ ವಿ ಗುಂಡೂರಾವ್ ಅವರು ತಮ್ಮ ಅನುಭವಗಳನ್ನು ಗುರುವಿನ ಸಹಯೋಗ ಹಾಗೂ ತಮ್ಮ ಜೀವನದಲ್ಲಿ ಗುರುವಿನ ಮಾರ್ಗದರ್ಶನವನ್ನು ನೆನೆದರು, ಪರಿಷದ್ ನ ರಾಜ್ಯ ಸಹ ಖಜಾಂಚಿಗಳಾದ ಭ. ರಾ ವಿಜಯಕುಮಾರ್ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ವಿದ್ಯಾರ್ಥಿ ಪ್ರಕಾರದ ಮುಖ್ಯಸ್ಥರಾದ ಶ್ರೀ ತಿಮ್ಮಣ್ಣ ಭಟ್ಟರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು , ರಾಜ್ಯ ಖಜಾಂಚಿಗಳಾದ ರಾಮಕೃಷ್ಣ ಶೌತ್ರಿಯುವರು ಉಪಸ್ಥಿತರಿದ್ದರು, ಪತ್ರಕರ್ತರಾದ ಸಂತೋಷ್ ತಮ್ಮಯ್ಯ, ಯೋಧರಾದ ಬ್ರಿಗೇಡಿಯರ್ ಕರ್ನಲ್ ಕುಮಾರನ್ ಅವರನ್ನು ಸನ್ಮಾನಿಸಲಾಯಿತು ಮತ್ತು ಸಪ್ತಗಿರಿ ಲೇಔಟ್ ನ ಅಭಾಸಪಾ ಸಾಹಿತ್ಯಕೂಟದ ಘೋಷಣೆಯೊಂದಿಗೆ ವಿದ್ಯುಕ್ತ ಚಾಲನೆ ಪಡೆಯಿತು.
ಅಭಾಸಾಪ ಬೆಂಗಳೂರಿನ ಘಟಕದ ಪರವಾಗಿ ಬೆಂಗಳೂರಿನ ಸಂಯೋಜಕರಾದ ರಾಮುರವರು ಅತಿಥಿಗಳ ಪರಿಚಯ ಮಾಡುಸುವುದರೊಂದಿಗೆ ಆರಂಭಿಸಿದರು, ದಿವ್ಯಾ ಹೆಗಡೆ ಕಬ್ಬಿನಗದ್ದೆಯವರು ಸೊಗಸಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಅಖಿಲಾ ಸತ್ಯನಾರಾಯಣರವರು ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪುಟಾಣಿಯೊಬ್ಬಳ ದೇವರನಾಮ ಎಲ್ಲರ ಮನ ಸೆಳೆಯಿತು.
ಮುಖ್ಯ ಅತಿಥಿಗಳಾದ ಎಂ ಎಸ್ ನರಸಿಂಹಮೂರ್ತಿಯವರು ತಮ್ಮ ಬಾಲ್ಯದಿಂದ ಹಿಡಿದು ಸಾಹಿತ್ಯದ ಗುರುಗಳಾದ ಅ.ರಾ. ಮಿತ್ರರವರವರೆಗೂ ಎಲ್ಲರನ್ನೂ ಸ್ಮರಿಸಿದರು, ತಮ್ಮ ಜೀವನದಲ್ಲಿ ಪ್ರೇರಣೆ ನೀಡಿದ ಅಧ್ಯಾಪಕರು, ಪ್ರಸಿದ್ಧ ಸಾಹಿತಿ ಎಂ ಕೆ ಇಂದಿರಾರವರನ್ನು, ಅ.ರಾ. ಮಿತ್ರ ಅವರೊಂದಿಗೆ ಮಧುರ ಕ್ಷಣಗಳನ್ನು ಸ್ಮರಿಸಿದರು. ಎಂ ಕೆ ಇಂದಿರಾರವರ ಮುತ್ತಿನಂತ ಅಕ್ಷರಗಳನ್ನು ಒಂದೇ ಬಾರಿಗೆ ಸ್ಪಷ್ಟ ಹಾಗೂ ಸ್ಫೂಟವಾಗಿ ಬರೆಯಲು ಕಲಿತದ್ದು ನೆನೆದರು. ಇಂದಿನ ಕಾಲದ ಮಲ್ಟಿಪಲ್ choice ನ ಬಗ್ಗೆ ವಿಡಂಬನೆಯ ಬಗ್ಗೆ ಮಾತನಾಡಿದರು.
ವೈ.ವಿ ಗುಂಡೂರಾವ್ ಅವರು ಕೂಡಾ ಗುರುಗಳ ಮಹತ್ವ ಹೇಳುತ್ತಾ ಸನ್ಯಾಸಿಗಳು ಕೂಡಾ ತಾಯಿಯನ್ನು ಪೂಜಿಸುತ್ತಾರೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮೃದುಲಾರವರು ವೇದವ್ಯಾಸರ ಬಗೆಗೆ ಹೇಳುತ್ತ ಅವರನ್ನು ಗುರು ಸ್ಥಾನದಲ್ಲಿ ಪೂಜಿಸುವ ಮಹತ್ವವನ್ನು ಹೇಳಿದರು. ವೇದವ್ಯಾಸರ ಕೃತಿಗಳ ಬಗ್ಗೆ ಹೇಳುತ್ತಾ, ವೇದಗಳು ಹೇಗೆ ವೈಜ್ಞಾನಿಕ ಎಂಬ ಕುರಿತು ಹೇಳುತ್ತಾ, ಪುರಾಣದ ಧ್ರುವ ರಾಜರ ಕತೆಯ ವೈಜ್ಞಾನಿತೆಯ ಕುರಿತು ಹೇಳಿದರು.
ನಂತರ ಎಂ ಎಸ್ ನರಸಿಂಹಮೂರ್ತಿಯವರೊಡನೆ ಸಂವಾದ ಕಾರ್ಯಕ್ರಮವಿತ್ತು. ಅಶ್ಲೀಲತೆ ಇಲ್ಲದೇ ಹಾಸ್ಯ ತಿಳಿ ಹಾಸ್ಯ ಪರಿಹಾಸ್ಯಗಳ ಬಗೆಗೆ ಸೊಗಸಾಗಿ ತಿಳಿಸಿದರು. ಕೊನೆಯಲ್ಲಿ ಬೆಂಗಳೂರು ಘಟಕದ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಮೂರ್ತಿ ಜೋಯಿಸರು ವಂದನಾರ್ಪಣೆ ಮಾಡಿದರು. ಜೊತೆಗೆ ಮಾತನಾಡುತ್ತ ಸಪ್ತಗಿರಿ ಲೇಔಟ್ ನ ಜನರಲ್ಲಿರುವ ಸಾಹಿತ್ಯದ ಕುರಿತಾದ ಒಲವು ಮತ್ತು ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದವರ ಪಾಲುಗಾರಿಕೆಯ ಕುರಿತು ಸಂತಸ ವ್ಯಕ್ತ ಪಡಿಸಿದರು. ಉತ್ತಮ ಸಮಾಜ ಕಟ್ಟುವಲ್ಲಿ ಎಲ್ಲ ವಯಸ್ಸಿನವರ ಪಾಲುಗಾರಿಕೆಯನ್ನು ಭವಿಷ್ಯದ ಉತ್ತಮ ಸಮಾಜಕ್ಕೆ ಮಕ್ಕಳ ಪಾಲುಗರಿಕೆಯನ್ನು ಕುರಿತು ಸಂತಸ ವ್ಯಕ್ತ ಪಡಿಸಿದರು.
ಎಲ್ಲರೊಂದಿಗೆ ಭಾಸ್ಕರ ಚಂದಾವರ್ ಅವರು ವಂದೇಮಾತರಂ ಗೀತೆಯ ನಂತರ ಹನುಮಾನ್ ಚಾಲೀಸ ಪಾರಾಯಣ ಮಂಗಳಾರತಿ, ತೀರ್ಥ ಪ್ರಸಾದದ ವ್ಯವಸ್ಥೆ ಮಾಡಿದ್ದು ಮತ್ತು ಕಾರ್ಯಕ್ರಮಕ್ಕೆ ಸ್ಥಳ ನೀಡಿದ ಶ್ರೀಮತಿ ಪ್ರತಿಮಾ ಸುಭಾಷ್ ಹಾಗೂ ಅವರ ಪತಿ ಶ್ರೀ ಸುಭಾಷ್ ರವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಕುಟುಂಬಗಳ ಪಾಲುದಾರಿಕೆಯೊಂದಿಗೆ ಸಾಹಿತ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.