ಭಾಗ್ಯನಗರದಲ್ಲಿ ಇದೇ ಸೆಪ್ಟೆಂಬರ್ 26-27/ 2023 ರಂದು ಎರಡು ದಿನಗಳ ರಾಷ್ಟ್ರೀಯ ಸಂಗೋಷ್ಟಿ ನಡೆಯಿತು. ಈ ರಾಷ್ಟ್ರೀಯ ಸಂಗೋಷ್ಠಿಯಲ್ಲಿ ದೇಶದ 16 ರಾಜ್ಯ ಗಳಿಂದ ಅಭಾಸಾಪ ಪ್ರತಿನಿಧಿಗಳು ಆಗಮಿಸಿದ್ದರು.
ಸಂಗೋಷ್ಠಿಯ ಪ್ರಾರಂಭದ ಅವಧಿಯಲ್ಲಿ ಅಭಾಸಾಪ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಮಾ. ಶ್ರೀಧರ ಪರಾಡಕರ್ಜಿ ಅವರು ದಿಕ್ಸೂಚಿಯ ಮಾತನಾಡುತ್ತಾ
- ಭಾರತೀಯತೆ ಮೆರೆಯುವ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಸಾಹಿತ್ಯ ರಚನೆಯಾಗಬೇಕು.
- ಉತ್ತಮವಾದ ನಮ್ಮ ಸಾಹಿತ್ಯವನ್ನು ಪ್ರಚುರಪಡಿಸಬೇಕು.
- ಇಂದು ಕೂಡ ಭಾರತೀಯ ಸಾಹಿತ್ಯಸಕ್ತರು ಉತ್ತಮ ಸಾಹಿತ್ಯವನ್ನು ಸ್ವಾಗತಿಸುತ್ತಾರೆ.
- ನಮ್ಮ ಭಾರತೀಯರ ಸಾಹಿತ್ಯ ಹಾಗೂ ಸಂಶೋಧನೆಗಳು ಪರಿಶುದ್ಧ ಹಾಗೂ ನವನವೀನ ವಾಗಿರುತ್ತವೆ ಇದಕ್ಕೆ ಉದಾಹರಣೆ ಎಂದರೆ ಚಂದ್ರಯಾನ 3 ಯಾರು ಆನ್ವೇಶಿಸದ ಹೊಸದಾದ ಚಂದ್ರನ ದಕ್ಷಿಣ ಧ್ರುವದಲ್ಲಿ ಗುರುತಿಸಿ ಚಂದ್ರಯಾನ ಮಾಡಿದ್ದು ನಮ್ಮ ನವ ನವೀನತೆಗೆ ಹೊಸ ಸಾಕ್ಷಿ ಆಗಿದೆ.ಮನುಷ್ಯನಲ್ಲಿಯ ನವನವೀನ ಕಲ್ಪನೆಗಳು ಸಾಹಿತ್ಯಸೃಷ್ಠಿಯ ಮೂಲಕ ಸಾಕಾರಗೊಳ್ಳಬೇಕು.
- ನವ ಭಾರತಕ್ಕೆ ನವ ಸಾಹಿತ್ಯ ಸೃಷ್ಟಿಯ ಅಗತ್ಯವಿದೆ.
- ಸಾಹಿತ್ಯ ದರ್ಪಣವಲ್ಲ ಅದು ಅರ್ಪಣ.
- ಸಾಹಿತ್ಯದಲ್ಲಿ ವರ್ತಮಾನದ ಸವಾಲುಗಳು, ಕಲ್ಪನಾ ದಾರಿದ್ರ್ಯ ಕಂಡು ಬರುತ್ತಿದೆ, ಜೀವನ ಗತಿಯೊಂದಿಗೆ ಸ್ಪರ್ಧಾಯುಕ್ತ ವಾದಂತೆ ಕಂಡುಬರುತ್ತಿದೆ.
- ವಿನೋಬಾಭಾವೆ ಅವರ ನುಡಿಯಂತೆ, ವಿಜ್ಞಾನ – ಆಧ್ಯಾತ್ಮ – ಸಾಹಿತ್ಯ ಕ್ಷೇತ್ರಗಳು ಪ್ರಭಾವಶಾಲಿ ಮಾಧ್ಯಮಗಳು.
- ಸಾಹಿತ್ಯ ರಚಿಸುವ ಮುನ್ನ ತನ್ನ ಸುತ್ತಲಿನ ಸಮಾಜದ ಬಗ್ಗೆ ಸೂಕ್ಷ್ಮ ಸಂವೇದಿ ಆಲೋಚಕನೂ ಆಗಿರಬೇಕು.
- ಪ್ರಕೃತಿ – ಸಂಸ್ಕೃತಿ – ವಿಕೃತಿ ಇವು ಮೂರು ಕೃತಿಗಳು. ಪ್ರಕೃತಿಯನ್ನು ಆಸ್ವಾದಿಸುತ್ತ ಅದರ ಸೌಂದರ್ಯವನ್ನು ಸಾಹಿತ್ಯ ಕೃತಿಯಲ್ಲಿ ಮೂಡಿ ಸುತ್ತ, ಈ ನೆಲದ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಮಾರ್ಗದಲ್ಲಿ ನಡೆಯಬೇಕು ಅದು ಸಾಹಿತ್ಯದಲ್ಲಿ ಧೇನಿಸಬೇಕು, ಸಮಾಜದ ವಿಕೃತಿಯನ್ನು ಆ ಮನೋಭಾವವನ್ನು ಕಾಲಕಾಲಕ್ಕೆ ಸಾಹಿತ್ಯದ ಮೂಲಕ ಉತ್ತರದಾಯಿಯಾಗಿ ನೀಡಬೇಕು.
- ಸಾಹಿತ್ಯ ರಚನೆ ಮಾಡುವಾಗ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಬಾರದು. ಮಾನವ ಸುಧಾರಣಾ ಸಾಹಿತ್ಯ ರಚನೆ ಆಗಬೇಕು.
- ವಿಕಸಿತ ಭಾರತದ ಕಲ್ಪನೆ ನಮಗಿರಬೇಕು ಗುಲಾಮಿ ಮಾನಸಿಕತೆಯಿಂದ ಹೊರ ಬಂದಾಗ ಸಲ್ಲಲೇಬೇಕಾದ ಗೌರವ ಸ್ವಾಭಾವಿಕವಾಗಿಯೇ ಲಭಿಸುವುದು.
ನಂತರ ಸಮಾರೋಪ ಸಮಾರಂಭದಲ್ಲಿ ಮಾ. ಶ್ರೀಧರ ಪರಾಡ್ಕರ್ ಜೀ ಮಾತನಾಡುತ್ತಾ, ಎಲ್ಲಾ ಪ್ರಕಾರದ ಸಾಹಿತ್ಯಕೃತಿಗಳೂ ಕೂಡ ತಪಸ್ಸಿನ ರೀತಿ ಮೂಡಿ ಬರಬೇಕು. ಯಾವುದೇ ತರಾತುರಿಯ ತೋರದ ಸಮಸ್ಥಿತಿಯ ಸಾಹಿತ್ಯ ರಚನೆಯಾದಾಗ ಅದು ಸರ್ವಕಾಲಿಕವಾಗಿ ಗಟ್ಟಿಯಾಗಿ ನಿಲ್ಲುವ ಸಾಹಿತ್ಯವಾಗುತ್ತದೆ ಇದಕ್ಕೆ ಗಟ್ಟಿ ಮನಸ್ಥಿತಿಯ ಅಗತ್ಯತೆ ಇರುತ್ತದೆ ಎಂಬ ಮಾತುಗಳನ್ನು ತಮ್ಮ ಸುದೀರ್ಘ ಭಾಷಣದಲ್ಲಿ ಮಾರ್ಗದರ್ಶನ ಮಾಡುತ್ತಾ ತಿಳಿಸಿದರು.