ಪ್ರಮುಖ ಮೈಲಿಗಲ್ಲುಗಳು

1. 2014ರ ವ್ಯಾಸಜಯಂತಿಯಂದು ಬೆಂಗಳೂರಿನಲ್ಲಿ ಹಿರಿಯ ಸಾಹಿತಿ ಬಾಬು ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ರಾ.ಸ್ವ.ಸಂಘದ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪನವರಿಂದ ರಾಜ್ಯದ ಮೊದಲ ಘಟಕದ ಉದ್ಘಾಟನೆ. 

2. 2016ರ  ಮೇ ತಿಂಗಳಲ್ಲಿ ಶಿರಸಿ ಸಮೀಪದ ಯಡಳ್ಳಿಯಲ್ಲಿ ನಡೆದ ಮೊದಲ ರಾಜ್ಯ ಅಧಿವೇಶನ. 

3. 2017ರಲ್ಲಿ ಬೆಂಗಳೂರಿನಲ್ಲಿ ‘ದಕ್ಷಿಣ ಭಾರತದ ಜಾನಪದ ಸಾಹಿತ್ಯ’ ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ಸಂಗೋಷ್ಠಿ. 

4. 2018ರ ಡಿಸೆಂಬರ್ ತಿಂಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ  ಎರಡನೆಯ ರಾಜ್ಯ ಅಧಿವೇಶನ. 

5. 2020ರಲ್ಲಿ ಕೊರೋನಾ ಸಂಕಷ್ಟಕಾಲದ ಲಾಕ್ಡೌನ್ ಸಂದರ್ಭದಲ್ಲಿ ಅಂತರ್ಜಾಲ ಕಾರ್ಯಕ್ರಮಗಳ ಮೂಲಕ ದಾಖಲೆಯ 138 ಸಾಹಿತ್ಯಕೂಟಗಳ ಉದ್ಘಾಟನೆ. ಸಾಹಿತ್ಯಕೂಟಗಳ ಮೂಲಕ ಮೊದಲ ಬಾರಿಗೆ ಎಲ್ಲ ಜಿಲ್ಲೆಗಳಿಗೆ ‘ಅಭಾಸಾಪ’ ಪ್ರವೇಶ. ‘ಅಭಾಸಾಪ’ದ 36 ಜಿಲ್ಲೆಗಳ ಪೈಕಿ 28ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ ಹಾಗೂ 16 ತಾಲೂಕು ಸಮಿತಿಗಳ ಉದ್ಘಾಟನೆ. ಈ ಅಂತರ್ಜಾಲ ಕಾರ್ಯಕ್ರಮಗಳ ಮೂಲಕ ಅಭಾಸಾಪ’ ಕಾರ್ಯಕರ್ತರ ಸಂಖ್ಯೆ 350ಕ್ಕೆ ಏರಿಕೆ. ಅಂತರ್ಜಾಲ ಕಥಾಕಮ್ಮಟ ಮತ್ತು ನಾಟಕಕಮ್ಮಟಗಳ ಆಯೋಜನೆ. 

6. 2021ರ ಮೇ ತಿಂಗಳಲ್ಲಿ ಅಂತರ್ಜಾಲ ಮೂಲಕ ಘೋಷಣಾ ಕಾರ್ಯಕ್ರಮ. 121 ಸಾಹಿತ್ಯಕೂಟಗಳು, 31 ಜಿಲ್ಲಾ ಸಮಿತಿಗಳು ಹಾಗೂ 43 ತಾಲೂಕು ಸಮಿತಿಗಳ ಘೋಷಣೆ. ಇದರ ಮೂಲಕ ‘ಅಭಾಸಾಪ’ಕ್ಕೆ ಲಭ್ಯವಾದ ಏಳುನೂರಕ್ಕೂ ಮೀರಿದ ಕಾರ್ಯಕರ್ತರ ತಂಡ. ಕ್ಲಬ್ ಹೌಸ್ ಕಾರ್ಯಕ್ರಮ ಆಯೋಜನೆ. 

7. 2022ರ ಫೆಬ್ರವರಿ ತಿಂಗಳಲ್ಲಿ ಉಜಿರೆಯಲ್ಲಿ ನಡೆದ ಮೂರನೆಯ ರಾಜ್ಯ ಅಧಿವೇಶನ. 

8. 2022ರಲ್ಲಿ ‘ಸ್ವರಾಜ್ಯ – ೭೫’ ಅಭಿಯಾನ: ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಭೇಟಿ ನೀಡಿ ಆ ಮನೆಗಳ ಹಿರಿಯರ ಸಮ್ಮಾನ ಮತ್ತು ಅಂಥ ಹೋರಾಟಗಾರರ ಕುರಿತು ವಿಚಾರಗೋಷ್ಠಿಗಳ ಆಯೋಜನೆ. 

9. 2022ರ ನವೆಂಬರ್‌ನಲ್ಲಿ ಕಲ್ಲಡ್ಕದಲ್ಲಿ ನಡೆದ ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮ. ರಾಜ್ಯದ 13 ಜಿಲ್ಲೆಗಳ ಆಯ್ದ 20 ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಪ್ರಮುಖರನ್ನು ಈ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.