ಶ್ರೀ ಸರಸ್ವತಿ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಇಂದು ಕಾಲೇಜು ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ ೨೫/೦೭/೨೦೨೪ ರಂದು ಏರ್ಪಡಿಸಲಾಗಿತ್ತು .
ಕಾಲೇಜ್ ವಿದ್ಯಾರ್ಥಿ ಪ್ರಕಾರದ ಶ್ರೀ ತಿಮ್ಮಣ್ಣ ಭಟ್ ಅವರು ‘ಸಾಹಿತ್ಯ ಕ್ಷೇತ್ರದ ಸಾಧಕರ ಪ್ರೇರಣಾದಾಯೀ ಜೀವನ’- ವಿಷಯದ ಕುರಿತು ಉಪನ್ಯಾಸ ನೀಡಿದರು.
ಕುವೆಂಪು, ಡಿವಿಜಿ, ದುಂಡಿರಾಜ್, ಮಣಿಕಾಂತ್, ವೇಣುಜಿ , ಗುರುರಾಜ ಕರ್ಜಗಿ ಮುಂತಾದ ಸಾಧಕರ ಜೀವನದ ಪ್ರೇರಣಾ ಘಟನೆಗಳನ್ನು ಉಪನ್ಯಾಸಕರು ಮನಮುಟ್ಟುವಂತೆ ವಿವರಿಸಿದರು.
ವಿದ್ಯಾರ್ಥಿಗಳು ತುಂಬಾ ಖುಷಿಯಿಂದ ವಿಷಯವನ್ನು ಆಲಿಸಿದರು. ಎಲ್ಲ ಉಪನ್ಯಾಸಕರು ಅವಧಿ ತುಂಬಾ ಅರ್ಥಪೂರ್ಣವಾಗಿತ್ತು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಸುಮಾರು 625 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾಂಶುಪಾಲ ಶ್ರೀ ಎನ್ ಚಂದ್ರಾರೆಡ್ಡಿ ಅವರು ಮತ್ತು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀ ನಾಗರಾಜ್ ಅವರು ವೇದಿಕೆಯಲ್ಲಿದ್ದರು.
ಇಡೀ ಕಾರ್ಯಕ್ರಮವು ವಿದ್ಯಾರ್ಥಿಗಳಿಂದಲೇ ನಿರ್ವಹಣೆಗೊಂಡಿದ್ದು ವಿಶೇಷವಾಗಿತ್ತು.
ಈ ಅವಧಿಯಲ್ಲಿ ವಿದ್ಯಾರ್ಥಿಗಳು ತುಂಬಾ ಉತ್ಸಾಹದಿಂದ ಖುಷಿಯಿಂದ ಪಾಲ್ಗೊಂಡಿದ್ದರು ಎಲ್ಲಾ ಉಪನ್ಯಾಸಕರು ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು ಅಂತ ಅಭಿಪ್ರಾಯ ದೊಂದಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಈ ತರದ ಕಾರ್ಯಕ್ರಮಗಳು ಆಗಾಗ ಆಗುತ್ತಿರಬೇಕೆಂದು ಅಭಿಪ್ರಾಯ ಪಟ್ಟರು.