ವಾಲ್ಮೀಕಿ ಜಯಂತಿಯ ವಿಶೇಷ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕದವತಿಯಿಂದ ಆದಿಕವಿ ಪುರಸ್ಕಾರ ಹಾಗೂ ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು

ವಾಲ್ಮೀಕಿ ಜಯಂತಿಯ ವಿಶೇಷ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕದವತಿಯಿಂದ ಆದಿಕವಿ ಪುರಸ್ಕಾರ ಹಾಗೂ ವಾಗ್ದೇವಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು. ಪ್ರತಿ ವರ್ಷ ಹಿರಿಯ ಸಾಹಿತಗಳೊಬ್ಬರಿಗೆ ಆದಿಕವಿ ಪುರಸ್ಕಾರ ಹಾಗೂ ಉದಯೋನ್ಮುಖ ಕವಿಗಳಿಗೆ ವಾಗ್ದೇವಿ ಪ್ರಶಸ್ತಿಯನ್ನು ಕೊಡಲಾಗುತ್ತ ಬಂದಿದೆ. ಪ್ರಶಸ್ತಿಯ ಮೊತ್ತ ಒಂದು ಲಕ್ಷದ್ದಾಗಿರುತ್ತದೆ ಜೊತೆಗೆ ಸ್ರಪ್ರಶಸ್ತಿ ಫಲಕ ನೆನಪಿನ ಕಾಣಿಕೆ ಕೊಡಲಾಗುತ್ತದೆ. 2023ನೇ ಸಾಲಿನ ಆದಿಕವಿ ಪುರಸ್ಕಾರವನ್ನು ಗುಲ್ಬಬರ್ಗಾ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಭಾಷಾವಿಜ್ಞಾನಿಗಳಾದ ಡಾ||ಸಂಗಮೇಶ ಸವದತ್ತಿಮಠ ಇವರಿಗೂ ಹಾಗೂ ಯುವ ಸಾಹಿತಿ ಎಸ್‌ ಕಾರ್ತಿಕ್‌ ಅವರಿಗೆ ವಾಗ್ದೇವಿ ಪ್ರಶಸ್ತಿಯನ್ನು ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಭಾಸಪಾದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಹರಿ ಪ್ರಕಾಶ ಕೋಣೆ ಮನೆಯವರು ವಹಿಸಿದ್ದರು, ಮುಖ್ಯ ಅತಿಥಿಗಳಾದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಜಸ್ಟೀಸ್‌ ಎನ್‌ ಕುಮಾರ್‌ರವರು ಹಾಗೂ ಆದಿ ಕವಿ ಪ್ರಶಸ್ತಿಯ ಪ್ರಾಯೋಜಕರಾದ ಜೆಕೆ ಗ್ರೂಪ್ಸ್‌ನ ಮಾಲೀಕರಾದ ಶ್ರೀ ಜಯರಾಮ್‌ರವರು ಹಾಗೂ ವಾಗ್ದೇವಿ ಪ್ರಶಸ್ತಿಯ ಪ್ರಾಯೋಜಕರು , ವಾಗ್ದೇವಿಯ ಸಂಸ್ಥೆಯ ಸಂಸ್ಥಾಪಕರು ಹಾಗೂ ಪೂರ್ವ ಇಸ್ರೋ ವಿಜ್ನಾನಿಗಳಾದ ಶ್ರೀ ಕೆ ಹರೀಶ್‌ರವರು ಭಾಗವಹಿಸಿದ್ದರು. ಅನಿವಾರ್ಯ ಕಾರಣಗಳಿಂದ ಡಾ|| ಸಂಗಮೇಶ ಸವದ್ತತಿಮಠರವರು ಕಾರ್ಯಕ್ರಮಕ್ಕೆ ಉಪಸ್ಥಿತರಾಗಲು ಆಗದ ಕಾರಣ ಅವರ ಪುತ್ರಿ ಸ್ಮಿತಾ ಮಹೇಶ್‌ರವರು ಅವರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಶ್ರೀ ಸತ್ಯನಾರಾಯಣ ಕಾರ್ತಿಕರವರು ಕೂಡ ತಮ್ಮ ಪರಿವಾರದೊಂದಿಗೆ ಬಂದು ಪ್ರಶಸ್ತಿ ಸ್ವೀಕಾರ ಮಾಡಿದರು. ಭಾರತಾಂಬೆ ಹಾಗೂ ಶಾರದೆಯ ಪೂಜೆಯೊಂದಿಗೆ ಆರಂಭವಾಯಿತು. ಅಭಾರಸಪಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ರಘುನಂದನ ಭಟ್‌ರವರು ಸಭೆಯಲ್ಲಿ ಸ್ವಾಗತ ಭಾಷಣವನ್ನು ಹಾಗೂ ಗಣ್ಯರ ಪರಿಚಯವನ್ನು ಮಾಡಿಸಿದರು. ಮೊದಲಿಗೆ ಆದಿಕವಿ ಪುರಸ್ಕೃತ ಡಾ|| ಸಂಗಮೇಶ ಸವದತ್ತಿಮಠರವರ ಪರಿಚಯವನ್ನು ಮಾಧುರಿ ದೇಶಪಾಂಡೆಯವರು ಮಾಡಿದರು ಡಾ|| ಮಗಳಾದ ಶ್ರೀಮತಿ ಸ್ಮಿತಾ ಮಹೇಶ್‌ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ನಂತರ ಕೆನಡಾದಿಂದ ಡಾ|| ಸಂಗಮೇಶ ಸವದತ್ತಿಮಠರವರು ಕಳುಹಿಸಿದ ಆಡಿಯೋ ಕೇಳಿಸಲಾಯಿತು. 136 ಪುಸ್ತಕಗಳನ್ನು ಬರೆದು ಪ್ರಕಟಿಸಿ, 500ಕ್ಕೂ ಹೆಚ್ಚು ಉಪನ್ಯಾಸಗಳನ್ನು ದೇಶ ವಿದೇಶದಲ್ಲಿ ಅಲಂಕರಿಸಿ, ಸರಿ ಸುಮಾರು 17-18 ಉನ್ನತ ಹುದ್ದೇಗಳನ್ನು ಅಲಂಕರಿಸಿ , 38ಕ್ಕೂ ಹೆಚ್ಚುನ ಪ್ರಶಸ್ತಿಗಳನ್ನು ಪಡೆದಿರುವ ಶ್ರೀಯುತರು ಭಾಷಾವಿಜ್ಞಾನಿಗಳಾಗಿ ಹೆಸರಾದವರು, ಸುಮಾರು 15 ಜನರಿಗೂ ಹೆಚ್ಚು ಜನರಕ್ಕೆ ಡಾಕ್ಟರೇಟ್‌ ಪದವಿ ಪಡೆಯಲು ಮಾರ್ಗದರ್ಶನ ಹಾಗೂ 20ಕ್ಕೂ ಹೆಚ್ಚು ವಿದ್ಯಾರ್ತಿಗಳಿಗೆ ಎಫ್‌ ಫಿಲ್‌ಗೆ ಮಾರ್ಗದರ್ಶನ ಮಾಡಿದ್ದಾರೆ. 80 ವರ್ಷ ವಯಸ್ಸಿನವರಾದ ಇವರು ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಸಲುವಾಗಿ ಅವಿರತವಾಗಿ ದುಡಿದಿದ್ದಾರೆ. ದೇಶ ವಿದೇಶಗಳಲ್ಲಿ ಕೂಡ ರಾಮಾಯಣ ಮಹಾಭಾರತ, ವಚನಗಳ ಮಹತ್ವವನ್ನು ತಿಳಿಸಿದ್ದಾರೆ.

ಸತ್ಯನಾರಾಯಣ ಕಾರ್ತಿಕ್‌ರವರು ಯುವ ಸಾಹಿತಿ ಹಾಗೂ ಸಂಶೋಧಕರಾಗಿದ್ದು ಅವರ ಪರಿಚಯವನ್ನು ಅಭಾಸಾಪದ ರಾಜ್ಯಸಹ ಖಜಾಂಚಿಗಳಾದ ಭ.ರಾ ವಿಜಯಕುಮಾರ್‌ ರವರು ಪರಿಚಯ ಮಾಡಿಕೊಟ್ಟರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಮಾಡಿರುವವರು ಹಾಗೂ ಪುರಾತತ್ವ ಇಲಾಖೆಯ ರಾಜ್ಯ ಹಾಗೂ ರಾಷ್ಟ್ರ ಸಂಶೋಧನೆಗಳಲ್ಲಿ ಶಾಸನಗಳ ಅಧ್ಯಯನದಲ್ಲಿ ನಿರತರಾಗಿರುವ ಇವರು 2016ರ ಅರಳು ಪ್ರಶಸ್ತಿ ಹಾಗೂ ಕೇಂದ್ರದಿಂದ ಕೊಡಲಾಗುವ ಬಾದಾರಯಣ ವ್ಯಾಸ ಸಮ್ಮಾನ್‌ ಪುರಸ್ಕೃತರು ನಂತರ ಪ್ರಶಸ್ತಿ ಪ್ರದಾನವಾದ ನಂತರ ಮಾತನಾಡಿದ ಎಸ್.‌ ಕಾರ್ತಿಕ್‌ರವರು ಭಾಷೆಗಳ ಮಧ್ಯ ಬೇಧಭಾವ ಮಾಡಬಾರದು ಹಾಗೂ ಸತ್ಯವನ್ನು ಸಂಶೋಧನೆಗಳ ಮೂಲಕ ತಿಳಿಯಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಜಸ್ಟೀಸ್‌ ಕುಮಾರ್‌ರವರು ಜನ ಸಾಮಾನ್ಯರನ್ನು ಮುಟ್ಟುವ ಸರಳ ಸಾಹಿತ್ಯದ ರಚನಯಾಗಬೇಕೆಂದು ಹೇಳಿದರು. ಶ್ರೀಯುತ ಜಯರಾಮ್‌ರವರು ಮಾತನಾಡಿ ಇಷ್ಟೆಲ್ಲ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಅಭಾಸಾಪದ ಕಾರ್ಯವನ್ನು ಶ್ಲಾಘಿಸಿದರು. ಕೆ. ಹರೀಶ್‌ರವರು ಮಾತನಾಡಿ ಸಾಹಿತ್ಯಸೇವೆಯಲ್ಲಿ ಹೀಗೆ ಪ್ರತಿ ವರ್ಷವೂ ಉತ್ತಮ ಉದಯೋನ್ಮುಖ ಕವಿಗೆ ಪ್ರೋತ್ಸಾಹ ನೀಡುವುದು ತಮ್ಮ ಸಣ್ಣ ಸೇವೆ ಎಂದರು. ಅಧ್ಯಕ್ಷ ಭಾಷಣ ಮಾಡಿದ ಶ್ರೀಹರಿಪ್ರಕಾಶಕೋಣೆಮನೆಯವರು ಇಂದು ಶಸ್ತಾಸ್ತ್ರಗಳ ಯುದ್ಧಕ್ಕಿಂತ ಬೌದ್ಧಿಕ ದಾಳಿ ದೇಶವನ್ನು ಕಾಡುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಅನೇಕ ಹಿರಿಯರು, ಬೇರೆ ಬೇರೆ ಸಂಸ್ಥೆಗಳ ಪ್ರಮುಖರು, ಅಭಾಸಾಪದ ರಾಜ್ಯ ಖಜಾಂಚಿಗಳಾದ ರಾಮಕೃಷ್ಣ ಶ್ರೌತಿಯವರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣ ಶೇವಿರೆಯವರು ಬೆಂಗಳೂರು ಮಹಾನಗರದ ಅಭಾಸಾಪ ಅಧ್ಯಕ್ಷರಾದ ಎಂ ಎಸ್‌ ನರಸಿಂಹಮೂರ್ತಿಯವರು ಉಪಸ್ಥಿತರಿದ್ದರು ಸಭೆಯ ಆರಂಭದಲ್ಲಿ ಶಾರದಾ ವಂದನೆಯ ಹಾಡನ್ನು ಶ್ರೀಮತಿ ಮಂಜುಳಾ ಮರಾಠೆಯವರು ಹಾಗೂ ಕೊನೆಯಲ್ಲಿ ವಂದೇ ಮಾತರಂ ಹಾಡನ್ನು ಫಾಲ್ಣುಣಿ ಭಟ್‌ ರವರು ಹಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಬೆಂಗಳೂರು ನಗರದ ಸಂಯೋಜಕರಾದ ಚಂದ್ರಶೇಖರ್‌ರವರು ಮಾಡಿದರೆ ನಿರ್ವಹಣೆಯನ್ನು ಶ್ರೀ ವರುಣ್‌, ಮಾಡಿದರು. ವಿದ್ಯಾರಣ್ಯಪುರದ ಶ್ರೀಕಂಠ ಭಾಳಗಂಚಿಯವರು, ಮಹಿಳಾಪ್ರಕಾರದ ಅಧ್ಯಕ್ಷರಾದ ಶ್ರೀಮತಿ ಶಾಂತಾ ನಾಗಮಂಲ ಹಾಗೂ ಕಾರ್ಯದರ್ಶಿಗಳಾದ ದಿವ್ಯ ಹೆಗಡೆ ಕಬ್ಬಿನಗದ್ದೆಯವರು , ಗಂಗಾವತಿಯ ಶ್ರೀ ಅಶೋಕ ರಾಯಕರ್‌ ಹಾಗೂ ಮೈಸೂರಿನ ಡಾ|| ವಿ ರಂಗನಾಥ್‌ ಹೀಗೆ ರಾಜ್ಯದ ಎಲ್ಲ ಕಡೆಯ ಜನರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *