ಬೆಂಗಳೂರಿನ ಇಸ್ಕಾನ್‌ ದೇವಾಲಯದ ಆವರಣದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತತ್ತು ಮತ್ತು ಇಸ್ಕಾನ್‌ ಸಹಭಾಗಿತ್ವದಲ್ಲಿ ಒಂದು ಸುಂದರ ಹಾಗೂ ಬಹು ಉಪಯುಕ್ತ ಕಮ್ಮಟ

ಬೆಂಗಳೂರಿನ ಇಸ್ಕಾನ್‌ ದೇವಾಲಯದ ಆವರಣದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತತ್ತು ಮತ್ತು ಇಸ್ಕಾನ್‌ ಸಹಭಾಗಿತ್ವದಲ್ಲಿ ಒಂದು ಸುಂದರ ಹಾಗೂ ಬಹು ಉಪಯುಕ್ತ ಕಮ್ಮಟವು ಫೆಬ್ರವರಿ 4 ಮತ್ತು 5ನೇ ತಾರೀಖಿನಂದು ಆಯೋಜಿಸಲಾಗಿತ್ತು. ಬಹಳ ವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮವು ಇಂದಿನ ಸಾಮಾಜಿಕ ಪರಿಸ್ಥಿತಿ ಮತ್ತು ಸಾಹಿತ್ಯ ನಡೆಯುತ್ತಿರುವ ಹಾದಿಯಲ್ಲಿ ಅತೀ ಅವಶ್ಯಕ ಎಂಬ ಭಾವನೆಯನ್ನು ಮೂಡಿಸಿತು. ಒಟ್ಟು 4 ಜನ ಪರಿಣತರ ಅತ್ಯುತ್ತಮವಾದ ವಿಚಾರ ಮಂಡನೆ ಮತ್ತು ಅವರೊಂದಿಗೆ ಆರೋಗ್ಯಕರವಾದ ಸಂವಾದದೊಂದಿಗೆ ಬಹಳ ಜ್ಞಾನದಾಯಿಯಾಗಿತ್ತು, ರಾಜ್ಯದ ಹಲವಾರು ಕಡೆಗಳಿಂದ ಜನರು ಬಂದಿದ್ದರು. 17-18 ವರ್ಷದ ಯುವಕರಿಂದ ಹಿಡಿದು 65ರ ವಯೋವೃದ್ಧರು ಪಾಲ್ಗೊಂಡಿದ್ದು ವಿಶೇಷ ಸಂಗತಿ ಸುಮಾರು 60-65 ಜನರ ಶಿಬಿರಾರ್ಥಿಗಳಿದ್ದರು. ಇಸ್ಕಾನ್‌ ಸಂಸ್ಥೆಯು ಎಲ್ಲರಿಗೂ ಇರಲು ವಸತಿ ಹಾಗೂ ಊಟೋಪಚಾರಗಳ ವ್ಯವಸ್ಥೆಯ ಜೊತೆಗೆ ಶಿಬಿರದ ಕಾರ್ಯಕ್ರಮ ನಡೆಸಲು ಸೂಕ್ತ ರೀತಿಯ ಸಹಾಯ ಸಮಯ ಸಮಯಕ್ಕೆ ಎಲ್ಲವೂ ನಡೆಯುವಂತೆ ಊಟ ಉಪಹಾರ ಪಾನೀಯ ಎಲ್ಲಕ್ಕೂ ಮಿಗಿಲಾಗಿ ಶ್ರೀಕೃಷ್ಣನ ದರ್ಶನ ವ್ಯವಸ್ಥೆಯನ್ನು ಮಾಡಿಸಿ ಕೊಟ್ಟಿದ್ದು ವಿಶೇಷವಾಗಿತ್ತು.

ಕಾರ್ಯಾಕ್ತಮದಲ್ಲಿ ರಾಜ್ಯದ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯದ ಪದಾಧಿಕಾರಿಗಳಾದ ನಾರಾಣ ಶೇವಿರೆ, ರಘುನಂದನ ಭಟ್‌ ಇವರು ಸಂಪೂರ್ಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಉಪಸ್ಥಿತರಿದ್ದು ಎಲ್ಲರಿಗೂ ಪ್ರೇರಣೆಯನ್ನು ನೀಡಿದರು. ಉದ್ಘಾಟನೆಯನ್ನು ಇಸ್ಕಾನ್‌ ಶ್ರೀ ಮಹೋತ್ಸಾಹ ಪದರಭುದಾಸ ಸ್ವಾಮಿ ಜೀಯವರು ಜೊತೆಗೆ ಅಭಾಸಪದ ರಾಜ್ಯ ಉಪಾಧ್ಯಕ್ಷರು ಆದ ಹರಿಪ್ರಕಾಶ ಕೋಣೆಮನೆಯವರು ಮಾಡಿದರು. ಪ್ರಸ್ತಾವಿಕ ಭಾಷಣವನ್ನು ಮಾಡುತ್ತಾ ಹರಿಪ್ರಕಾಶರವರು ಕಾರ್ಯಕ್ರಮದ ಉದ್ದೇಶವನ್ನು ಹೇಳುತ್ತಾ ಇಂದಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಕಮ್ಮಟದ ಅವಶ್ಯಕತೆಗಳನ್ನು ಹೇಳಿದರು ಹಾಗೂ ಕಮ್ಮಟದ ಯಶಸ್ಸಿಗೆ ಶುಭ ಹಾರೈಸಿದರು. ನಂತರದ ಅವಧಿಯಲ್ಲಿ ಪ್ರಸಿದ್ಧ ಚಿಂತಕರು ಮತ್ತು ವಿದ್ವಾಂಸರಾದ ಸೂರ್ಯ ಪ್ರಕಾಶ ಪಂಡಿತರು ಸಾಹಿತ್ಯದಲ್ಲಿ ಅಧ್ಯಾತ್ಮ” ಎಂಬ ವಿಚಾರವನ್ನು ಹೇಳುತ್ತಾ ಸಾಹಿತ್ಯ ಹಾಗೂ ಆಧ್ಯಾತ್ಮ ಎರಡೂ ಹೇಗೆ ಹಾಸು ಹೊಕ್ಕಾಗಿದೆ ಅದನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ರಾಮಾಯಣದ ಉದಾಹರಣೆಗಳನ್ನು , ಸಾಹಿತ್ಯಲ್ಲಿ ಬಹು ಮುಖ್ಯವಾದ ಮೂರು ತತ್ವಗಳಾದ ಒಳ್ಳೆಯದು, ಸತ್ಯ ಹಾಗೂ ಸೌಂದರ್ಯವನ್ನು ಬಳಸಿಕೊಂಡು ರಚನೆ ಮಾಡಬೇಕು ಎಂದು ಹೇಳಿ ಅಧ್ಯಾತ್ಮವನ್ನು ಹಾಗೂ ಸಾಹಿತ್ಯವನ್ನು ಹೇಗೆ ದಿನ ನಿತ್ಯದ ಜೀವನದಲ್ಲಿ ರೂಢಿಸಿಕೊಳ್ಳಬಹುದೆಂದುಇ ಹೇಳಿದರು. ನಂತರದ ಅವಧಿಯಲ್ಲಿ ವಿದುಷಿ ಮೃದುಲಾ ಅವರು ಮಹಾಭಾರತದಲ್ಲಿ ಬರುವ ಅಲೌಕಿಕ ಪಾತ್ರಗಳ ಬಗೆಗೆ ಹೇಳುತ್ತಾ ದ್ರೌಪದಿ ದೇವಿ ಕುಂತಿ ಮೊದಲಾದ ಪಾತ್ರಗಳಿಂದ ನಾವು ಹೇಗೆಲ್ಲ ಪ್ರೇರಣೆಯನ್ನು ಪಡೆಯಬೇಕು ಎಂಬುದನ್ನು ಹೇಳಿದರು, ಎಲ್ಲ ಭಾಷಕಾರರೂ ಕೂಡ ಪ್ರೇರಣಾದಾಯಕವಾಗಿ ಹೇಳಿದ್ದು ರಾಮಾಯಣ ಹಾಗೂ ಮಹಾಭಾರತಗಳ ಮೂಲ ಕೃತಿಗಳನ್ನು ಓದಿದಾಗ ಅದರ ಸ್ವರಸ್ಯ ಮತ್ತು ಮಹತ್ವವನ್ನು ತಿಳಿಯ ಬಹುದೆಂದು ತಿಳಿಸಿದಾಗ ಕಮ್ಮಟದಲ್ಲಿರುವ ಶಿಬಿರಾರ್ಥಿಗಳಿಗೆ ಮೂಲ ಪುಸ್ತಕ ಓದಲೇ ಬೇಕೆಂಬ ಹಂಬಲ ಉಂಟಾಯಿತು. ರಾತ್ರಿ 3 ಅವಧಿಯ ನಂತರ ಅನೌಪಚಾರಿಕವಾಗಿ ಪರಸ್ಪರ ಪರಿಚಯವಾಗುವಂತೆ ಎಲ್ಲರೂ ತಮ್ಮ ಪರಿಚಯ ಹಾಗೂ ಈ ಕಮ್ಮಟಕ್ಕೆ ಬಂದ ಕಾರಣಗಳನ್ನು ಹಂಚಿಕೊಂಡರು.

ಮಾರನೆಯದಿನ ಮುಂಜಾನೆ ಇಸ್ಕಾನಿನ ಶ್ರೀ ವಿಗ್ರಹದಾಸ ಸ್ವಾಮಿ ಜೀಯವರು ಆಧ್ಯಾತಿಕ ವ್ಯಕ್ತಿತ್ವವಾಗಿ ಕೃಷ್ಣ ಎಂಬ ವಿಚಾರವನ್ನು ಹೇಳುತ್ತಾ ಕೃಷ್ಣನನನ್ನು ಈಗಿನ ಕಾಲದ ಜನರು ಹೇಗೆ ಸ್ತ್ರೀ ಲೋಲುಪನೆಂದು ಬಿಂಬಿಸುತ್ತಾರೆ ಹಾಗೂ ಅದು ಎಷ್ಟು ತಪ್ಪು ಜೊತೆಗೆ ಕೃಷ್ಣನಿಂದ ನಾವು ಎನೆಲ್ಲಾ ವಿಷಯಗಳನ್ನು ಕಲಿಯ ಬಹುದೆಂದು ಸೊಗಸಾಗಿ ಹೇಳಿದರು. ಮುಂದಿನ ಅವಧಿಯಲ್ಲಿ ಗಮಕ ವ್ಯಾಖ್ಯಾನಕಾರರಾದ ಶ್ರೀಮತಿ ಶಾಂತಾ ನಾಗಮಂಗಲರವರು ದೊಡ್ಡವರು ಮಾಡಿದ ತಪ್ಪನ್ನು ಹೇಗೆ ಸಣ್ಣವರು ತಿದ್ದಬಹುದು ತಂದೆತಾಯಿಗಳಿಗೆ ವಿಧೇಯರಾಗಿ ಬದುಕುವುದು ಹೇಗೆ ಎಂಬುದನ್ನು ರಾಮಾಯಣ ಕಾವ್ಯವು ಹೇಳಿದೆ, ರಾಮನ ಜನಪ್ರಿಯತೆ,, ಕೈಕೇಯಿಯ ಸ್ವಾರ್ಥ, ಸುಮಿತ್ರೆಯ ಗಟ್ಟಿ ವ್ಯಕ್ತಿತ್ವ, ಲಕ್ಷಣ ಹಾಗೂ ಭರತರ ಭ್ರಾತ್ರ ಪ್ರೇಮ ಎಲ್ಲವೂಗಳನ್ನು ವಿವರಿಸುವ ” ರಾಮಾಯಣದಲ್ಲಿ ಬರುವ ಅಲೌಕಿಕತೆಯ” ಬಗೆಗೆ ಚರ್ಚಿಸಿದರು. ಕಾರ್ಯಕ್ರದ ವಿಶೇಷವೆಂದರೆ ಸಂವಾದದ ರೂಪದಲ್ಲಿ ಶಿಬಿರಾರ್ಥಿಗಳ ಅನುಮಾನಗಳನ್ನು ಪರಿಹರಿದ್ದಾಗಿತ್ತು.

ಕೊನೆಯಲ್ಲಿ ಸಮಾರೋಪವನ್ನು ಅಭಾಸಪಾದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಶೇವರಿಯವರು ಎರಡೂ ದಿನ ನಡೆದ ಕಾರ್ಯಕ್ರದ ಎಲ್ಲರ ಮಾತುಗಳ ಸಾರಾಂಶವನ್ನು ಹೇಳಿ ಇಂದಿನ ಕಾಲದಲ್ಲಿ ಮೂಲಕ್ಕೆ ಧಕ್ಕೆ ಬಾರದಂತೆ ಬರವಣಿಗೆಯನ್ನು ಬರೆಯುವುದರ ಮಹತ್ವವನ್ನು ಹಾಗೂ ನಮ್ಮ ಮೂಲ ಗ್ರಂಥಗಳಾದ ರಾಮಾಯಣ ಮಹಾಭಾರತ ಭಾಗವತಗಳಿಂದ ಸ್ಪೂರ್ತಿ ಪಡೆದು ಅದನ್ನು ನಾಲ್ಕು ಜನರಿಗೆ ತಲುಪಿಸುವ ಮಹತ್ವನ್ನು ಹೇಳಿದರು. ಅಭಾಸಪವತಿಯಿಂದ ಕಾರ್ಯಕ್ರಮದ ಆಯೋಜನೆಯನ್ನು ಪ್ರತಿಯೊಂದು ಸಣ್ಣ ಪುಟ್ಟ ಕೆಲಸಗಳನ್ನು ನಿರ್ವಹಿಸಿದ ಬೆಂಗಳೂರಿನ ಅಭಾಸಪ ಘಟಕ ಒಂದರ ಪದಾಧಿಕಾರಿಶ್ರೀ ವರುಣರವರು ಮತ್ತು ಕಾರ್ಯಕ್ರಮದಲ್ಲಿ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್‌ ಹಾಗೂ ಪೋಟೋಗಳನ್ನು ತೆಗೆದು ಅಭ್ಯರ್ತಿಗಳ ಪಟ್ಟಿ ತಯಾರಿಸುವುದರಿಂದ ಹಿಡಿದು ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಶೀಕಂಠ ಬಾಳಗುಂಚಿಯವರು. ಎಲ್ಲಕ್ಕೂ ಹೆಚ್ಚಾಗಿ ಕಾರ್ಯಕ್ರಮವನ್ನು ಮೊದಲಿನಿಂದ ಹಿಡಿದು ಕೊನೆಯವರೆಗೆ ಸಕ್ರಿಯವಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಆರಂಭದಿಂದ ಕಡೆಯವರೆಗೂ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಯಶಸ್ವಿಯಾಗಿ ನಡೆಸಿದ ಶ್ರೀ ವಿಜಯ ಕುಮಾರ್‌ ಭಾರತೂರ್ ರವರು. ಹಾಗೂ ಎಲ್ಲ ಸಂಪೂರ್ಣ ಕಾರ್ಯಕ್ರಮವನ್ನು ಮಾರ್ಗದರ್ಶನ ಮಾಡಿ ಮುನ್ನಡಿಸಿದ ಅಭಾಸಪದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಘುನಂದನ ಭಟ್‌ ಜೀ ಹಾಗೂ ಶ್ರೀ ನಾರಾಯಣ ಶೇವಿರೆಯವರು, ಮತ್ತು ಮೈಸೂರಿನ ಡಾ|| ವಿ ರಂಗನಾಥ ಎಲ್ಲರೂ ಕೂಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೇರಿಸಿದರು. ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಅಭಾಸಪದ ಪ್ರಕಟಣೆಯ ನಾಲ್ಕು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.

ಇಂತಹ ಕಮ್ಮಟಗಳು ಇಂದಿನ ಪರಿಸ್ಥಿತಿಯಲ್ಲಿ ಅತೀ ಅವಶ್ಯಕವಾಗಿದೆ. ಬರವಣಿಗೆಯಲ್ಲಿ ತೊಡಗಿಸಿ ಕೊಳ್ಳುವ ಜನರಿಗೆ ಅವರು ಹೇಳಬೇಕಾದ ಸತ್ಯ ಹಾಗೂ ಹೇಗೆಲ್ಲ ವಿಸ್ತಾರವಾಗಿ ಬರೆದರೂ ತಮ್ಮ ಅನಿಸಿಕೆಗಳನ್ನು ಯಾವ ಒಂದು ರೇಖೆಯನ್ನು ಇಟ್ಟುಕೊಂಡು ಬರೆಯ ಬಹುದೆಂಬ ಅರಿವು ಮೂಡಿಸುತ್ತದೆ.

Leave a Reply

Your email address will not be published. Required fields are marked *