ಕೇಂದ್ರದಲ್ಲಿ

ಕೇಂದ್ರ ಸಮಿತಿ ನಡೆಸುತ್ತಿರುವ ಕಾರ್ಯ/ಕಾರ್ಯಕ್ರಮಗಳು ಹೀಗಿವೆ: 

* ಮೂರು ವರ್ಷಗಳಿಗೊಮ್ಮೆ ನಿರ್ದಿಷ್ಟ ವಿಷಯದ ಮೇಲೆ ರಾಷ್ಟ್ರೀಯ ಅಧಿವೇಶನ. 

* ಅಖಿಲ ಭಾರತೀಯ ಸ್ತರದಲ್ಲಿ ವರ್ಷಕ್ಕೆ ನಾಲ್ಕೈದು ವಿಷಯಾಧಾರಿತ ಸಂಗೋಷ್ಠಿಗಳು. 

* ಮಕ್ಕಳಿಗೆ ಆಕರ್ಷಕವಾಗಿ ಕಥೆಹೇಳುವವರ ಕಮ್ಮಟ. 

* ಉದಯೋನ್ಮುಖ ಸಾಹಿತಿಗಳ ಕಾರ್ಯಾಗಾರ. 

* ಪ್ರತಿವರ್ಷ ದೇಶದೆಲ್ಲೆಡೆಯ ಆಯ್ದ ಇಪ್ಪತ್ತು ಸಾಹಿತಿಗಳ ನಾಲ್ಕು ದಿನಗಳ ಸಾಹಿತ್ಯಯಾತ್ರೆ. ಈ ಯಾತ್ರೆಯ ಅನುಭವದಲ್ಲಿ ಬರೆದ ಕಥೆ, ಕವನ, ಪ್ರಬಂಧಗಳ ಸಂಕಲನ ಪ್ರಕಟನೆ. 

* ಸಾಧಕ ಸಾಹಿತಿಗಳಿಗೆ ಸಮ್ಮಾನ. 

* ಕಾರ್ಯಕರ್ತರ ವಾರ್ಷಿಕ ಅಭ್ಯಾಸವರ್ಗ. 

* ‘ಸಾಹಿತ್ಯ ಪರಿಕ್ರಮಾ’ ಎಂಬ ಹಿಂದಿ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಪ್ರಕಾಶನ. 

* ಸಾಹಿತ್ಯ ಪುಸ್ತಕ ಪ್ರಕಾಶನ..

ಅಖಿಲ ಭಾರತೀಯ ಸ್ತರದ ವಿವಿಧ ಕಾರ್ಯಕ್ರಮಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೆಲವು ಸಾಹಿತಿಗಳು: ಡಾ. ಎಸ್. ಎಲ್. ಭೈರಪ್ಪ, ಡಾ. ಪ್ರಧಾನ ಗುರುದತ್, ಶ್ರೀಮತಿ ಟಿ. ಎನ್. ನಾಗರತ್ನ, ಶ್ರೀ ಚಂದ್ರಶೇಖರ ಭಂಡಾರಿ, ಡಾ. ಉಷಾ ಶ್ರೀವಾತ್ಸವ್, ಶ್ರೀ ನಾಗೇಂದ್ರ ದೊಡ್ಡಮಣಿ, ಶ್ರೀಮತಿ ಶೈಲಜಾ ಗೋರನಮನೆ, ಡಾ. ಶಶಿಧರ ನರೇಂದ್ರ, ಶ್ರೀ ರಘುನಂದನ ಭಟ್, ಶ್ರೀ ಗುರುರಾಜ ಕುಂದಾಪುರ, ಶ್ರೀ ವೃಷಾಂಕ ಭಟ್, ಶ್ರೀ ನವೀನ ಹುಳೇಗಾರು