ರಾಜ್ಯದ ಚಟುವಟಿಕೆಗಳು

ರಾಜ್ಯದಲ್ಲಿ ‘ಅಭಾಸಾಪ’ ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಹೀಗಿವೆ: 

  • ಮೂರು ವರ್ಷಗಳಿಗೊಮ್ಮೆ ರಾಜ್ಯ ಅಧಿವೇಶನ. 
  • ಯುವಸಾಹಿತಿಗಳ ಚಿಂತನಗೋಷ್ಠಿ. 
  • ಕಥೆ, ಕವನ, ನಾಟಕ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕಮ್ಮಟ ಆಯೋಜನೆ. 
  • ವ್ಯಾಸಜಯಂತಿ, ವಾಲ್ಮೀಕಿಜಯಂತಿ ಮತ್ತು ಯುಗಾದಿ ಹೀಗೆ ವರ್ಷದಲ್ಲಿ ಮೂರು ಬಾರಿ ಜಿಲ್ಲಾ ಹಾಗೂ ತಾಲೂಕು ಸಮಿತಿಗಳು ನಡೆಸುವ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳು. 
  • ತನ್ನ ತಂಡದ ಸದಸ್ಯರ ಸಾಹಿತ್ಯಕ ವಿಕಾಸಕ್ಕಾಗಿ ಸಾಹಿತ್ಯಕೂಟವು ಪ್ರತಿವಾರ ನಡೆಸುವ ಸಾಹಿತ್ಯ ಚಟುವಟಿಕೆ. 
  • ಕಿಶೋರ ಸಾಹಿತ್ಯಕ ಪ್ರತಿಭೆಗಳ ವಿಕಾಸಕ್ಕಾಗಿ ಮಕ್ಕಳ ಪ್ರಕಾರ, ಯುವ ಸಾಹಿತ್ಯಕ ಪ್ರತಿಭೆಗಳ ವಿಕಾಸಕ್ಕಾಗಿ ವಿದ್ಯಾರ್ಥಿ ಪ್ರಕಾರ ಹಾಗೂ ಮಹಿಳೆಯರಿಗೆ ಸಾಹಿತ್ಯ ವೇದಿಕೆಯನ್ನು ಕಲ್ಪಿಸುವುದಕ್ಕಾಗಿ ಮಹಿಳಾ ಪ್ರಕಾರಗಳ ಮೂಲಕ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳ ಆಯೋಜನೆ. 
  • ಕಾರ್ಯಕರ್ತರ ವಾರ್ಷಿಕ ಅಭ್ಯಾಸವರ್ಗ. 
  • ಪ್ರತಿ ವರ್ಷ ಜೂನ್ ತಿಂಗಳಲ್ಲಿ ಸದಸ್ಯತಾ ಅಭಿಯಾನ. 
  • ವಾಲ್ಮೀಕಿಜಯಂತಿ ಸಂದರ್ಭದಲ್ಲಿ ಸಾಧಕಸಾಹಿತಿ ಮತ್ತು ಭರವಸೆಯ ಯುವಸಾಹಿತಿಗಳಿಗೆ ಆದಿಕವಿ ಪುರಸ್ಕಾರ ಮತ್ತು ವಾಗ್ದೇವಿ ಪ್ರಶಸ್ತಿ ಪ್ರದಾನ. 
  • ಸಂಸ್ಕೃತ ಕ್ಷೇತ್ರದಲ್ಲಿ ಸಾಧನೆಗೈದ, ಸಾಮಾಜಿಕ ಕಾಳಜಿ ಮತ್ತು ರಾಷ್ಟ್ರೀಯ ದೃಷ್ಟಿಕೋನವುಳ್ಳ ಸಾಧಕರಿಗೆ ಪ್ರತಿವರ್ಷ ವಿದ್ವಾನ್ ರಂಗನಾಥ ಶರ್ಮಾ ಪ್ರಶಸ್ತಿಪ್ರದಾನ. 
  • ಆಯ್ದ ಸಾಹಿತ್ಯಕೃತಿಗಳ ಪ್ರಕಾಶನ.