Panchatantra
ಹೈಸ್ಕೂಲ್‌ ಮಕ್ಕಳಿಗಾಗಿ ಪಂಚತಂತ್ರದ ಕಥೆ ಹೇಳುವ ಸ್ಪರ್ಧೆ

ಪಂಚತಂತ್ರ ಕಥೆಗಳನ್ನು ಹೇಳಿ, ಆಕರ್ಷಕ ಬಹುಮಾನ ಗೆಲ್ಲಿ

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಸಾಹಿತ್ಯದಲ್ಲಿನ ಆಸಕ್ತಿ ಸಮಾಜದಲ್ಲಿ ಕ್ಷೀಣಿಸುತ್ತಿದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಂಗಳೂರು ಮಹಾನಗರ ವತಿಯಿಂದ ಪಂಚತಂತ್ರ ಕಥಾ ಸ್ಪರ್ಧೆ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಸರಳವಾಗಿ ರಾಜನೀತಿ ಶಾಸ್ತ್ರವನ್ನು ಕಥೆಗಳ ಮೂಲಕ ತಿಳಿಸುವ ವಿಷ್ಣು ಶರ್ಮರ ಪಂಚತಂತ್ರ ಕಥೆಗಳನ್ನು ಓದಿ ಯಾವುದಾದರೂ ಒಂದು ತಂತ್ರದಲ್ಲಿನ ಕಥೆಯನ್ನು ಆಯ್ಕೆ ಮಾಡಿಕೊಂಡು ಮೂರು ನಿಮಿಷ ಮೀರದಂತೆ ವಿಡಿಯೋ ರೆಕಾರ್ಡ್ ಮಾಡಿ ನಮಗೆ ಕಳುಹಿಸಿಕೊಡಬೇಕು. ಉತ್ತಮವಾಗಿ ಕಥೆಯನ್ನು ಹೇಳಿದ ಮಕ್ಕಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

  • ಮನೆಯಲ್ಲೇ ಕುಳಿತು ಕಥೆ ಹೇಳಿ
  • ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಕಳಿಸಿ
  • ಆಕರ್ಷಕ ಬಹುಮಾನ ಗೆಲ್ಲಿ
  • ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ

ಯಾರು ಭಾಗವಹಿಸಬಹುದು?
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲೆಗಳಲ್ಲಿ ಓದುತ್ತಿರುವ 8, 9,10ನೇ ತರಗತಿ ವಿದ್ಯಾರ್ಥಿ / ವಿದ್ಯಾರ್ಥಿನಿಯರು

ಬಹುಮಾನಗಳ ವಿವರ?
ತರಗತಿವಾರು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು

ಯಾವ ಕಥೆ ಹೇಳಬೇಕು?
ಪಂಚತಂತ್ರದ ಐದು ತಂತ್ರಗಳಲ್ಲಿ ಯಾವುದಾದರೂ ಒಂದು ತಂತ್ರದ, ಯಾವುದಾದರೂ ಒಂದು ಕಥೆ. ಕಥೆಯ ಭಾಗವಾಗಿ ನೀತಿಯನ್ನು ಉಲ್ಲೇಖಿಸುವುದು ಕಡ್ಡಾಯ.

ಪಂಚತಂತ್ರದ ಕಥೆ ಎಲ್ಲಿ ಸಿಗುತ್ತದೆ?
ಯಾವುದಾದರು ಪುಸ್ತಕದ ಅಂಗಡಿಗಳಲ್ಲಿ, ಆನ್‌ಲೈನ್‌ನಲ್ಲಿ

ಕಥೆ ಹೇಳುವುದಕ್ಕೆ ಏನಾದರು ಸಮಯದ ಮಿತಿ ಇದೆಯೇ?
3 ನಿಮಿಷದೊಳಗೆ ಕಥೆಯನ್ನು ಹೇಳಬೇಕು

ಕಥೆಯನ್ನು ಯಾವ ಭಾಷೆಯಲ್ಲಿ ಹೇಳಬೇಕು?
ಕನ್ನಡ ಭಾಷೆಯಲ್ಲಿ ಹೇಳಿದ ಕಥೆಯನ್ನು ಮಾತ್ರ ಪರಿಗಣಿಸಲಾಗುವುದು.

ವಿಡಿಯೋ ಕಳಿಸಲು ಕಡೆಯ ದಿನಾಂಕ ಯಾವುದು?
ಪತ್ರಕದಲ್ಲಿ ಎಲ್ಲಾ ಮಾಹಿತಿಗಳನ್ನು ತುಂಬಿ 10ನೇ ಸೆಪ್ಟಂಬರ್ 2024ರೊಳಗೆ ವಿಡಿಯೋ ಕಳುಹಿಸ ಬೇಕು. ನಂತರ ಬಂದ ವಿಡಿಯೋಗಳನ್ನು ಪರಿಗಣಿಸಲಾಗುವುದಿಲ್ಲ.

ವಿಡಿಯೋ ಎಲ್ಲಿಗೆ ಕಳಿಸಬೇಕು?
ಈ ಕೆಳಗಿನ ಪತ್ರಕವನ್ನು ಭರ್ತಿ ಮಾಡಿ, ವಿಡಿಯೋ ಅಪ್‌ಲೋಡ್‌ ಮಾಡಿ.
ಮಾಹಿತಿ ಪತ್ರಕ

ಹೆಚ್ಚಿನ ಮಾಹಿತಿ ಬೇಕಾದಲ್ಲಿ ಏನುಮಾಡಬೇಕು?
ಕೆಳಗಿನ ಇಮೇಲ್‌ ವಿಳಾಸಕ್ಕೆ ನಿಮ್ಮ ಪ್ರೆಶ್ನೆಗಳನ್ನು ಪಡೆದು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ
ಸಂಪರ್ಕಕ್ಕೆ: ಇಮೇಲ್: absp.bangalore@gmail.com

Leave a Reply

Your email address will not be published. Required fields are marked *