ದಿನಾಂಕ ೨/೧೦/೨೦೨೩ ರಂದು ಬೆಂಗಳೂರಿನ ಗಿರಿನಗರದ ಶಂಕರ ಸೇವಾ ಟ್ರಸ್ಟ್‌ನ ಶಂಕರ ಸೇವಾ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಹಿಳಾ ಪ್ರಕಾರ , ಅಭಾಸಾಪ ಬೆಂಗಳೂರು ಘಟಕದ ಸಂಯುಕ್ತ ಆಯೋಜನೆಯಲ್ಲಿ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ದಿನಾಂಕ ೨/೧೦/೨೦೨೩ ರಂದು ಬೆಂಗಳೂರಿನ ಗಿರಿನಗರದ ಶಂಕರ ಸೇವಾ ಟ್ರಸ್ಟ್‌ನ ಶಂಕರ ಸೇವಾ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಹಿಳಾ ಪ್ರಕಾರ , ಅಭಾಸಾಪ ಬೆಂಗಳೂರು ಘಟಕದ ಸಂಯುಕ್ತ ಆಯೋಜನೆಯಲ್ಲಿ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕವಿತಾ ವಾಚನ ಗಾಯನ ವ್ಯಾಖ್ಯಾನ ವಿಶೇಷ ಕವಿ ಗೋಷ್ಠಿ ಇದಾಗಿತ್ತು. ಕಳೆದ ಆರು ತಿಂಗಳಿನಿಂದ ಆರಂಭವಾಗಿರುವ ಮಹಿಳಾ ಪ್ರಕಾರದ 5ನೇ ಕಾರ್ಯಕ್ರಮವು ಇದಾಗಿದ್ದು ಕವಿತೆಯ ಕಟ್ಟು, ಮಟ್ಟು, ಹುಟ್ಟು ಮೊದಲಿಗೆ ಕವಿಯಿಂದ ಕವನದ ವಾಚನ ನಂತರ ಗಾಯಕರಿಂದ ಸುಶ್ರಾವ್ಯ ಗಾಯನ ನಂತರ ಆ ಕವನದ ಔಚಿತ್ಯ ಮತ್ತು ಕವಿತೆ ಹೇಗೆ ಹುಟ್ಟಿತು ಎಂಬ ಕ್ರಮದಿಂದ ಕಾರ್ಯಕ್ರಮವು ಸೊಗಸಾಗಿ ಮೂಡಿ ಬಂದಿತು. ಅಧ್ಯಕ್ಷತೆಯನ್ನು ಸಾಹಿತಿ, ಕವಿ ಶ್ರೀಯುತ ಎಮ್‌ ಎಸ್‌ ನರಸಿಂಹಮೂರ್ತಿಯವರು ಅಭಾಸಾಪ ಬೆಂಗಳೂರು ಘಟಕದ ಅಧ್ಯಕ್ಷರು, ವಹಿಸಿದ್ದರು. 8 ಜನ ಕವಿಗಳು ಮತ್ತು 4 ಜನ ಗಾಯಕರು ಸೇರಿ ಈ ಕಾರ್ಯಕ್ರಮವನ್ನು ಬಹಳ ವಿಶೇಷವಾಗಿ ನಡೆಸಿಕೊಟ್ಟರು. ಇದರಲ್ಲಿ ಹೊಸ ಹೊಸ ಕವಿಗಳ ಹೊಸ ಕಾವ್ಯ ಸೃಷ್ಟಿಗೆ ಸಂಗೀತದಲ್ಲಿ ರಾಗ ಸಂಯೋಜನೆ ಮಾಡಿದ್ದು ವಿಶೇಷವಾಗಿತ್ತು ಶ್ರೀಮತಿ ಶೀಲಾ ಅರಕಲಗೂರುರವರ ಸೂರ್ಯೋದಯದ ಕುರಿತ ಕವನ, ಡಾ. ಮಾರುತಿರಾವ್‌ ಅವರ ಜಲಧಾರೆಯ ಕುರಿತಾದ ಕವನವನ್ನು ಗಾಯಕಿ ಕುಮಾರಿ ಆಶ್ರೀತ ಹಾಡಿದರೆ, ಶ್ರೀಯುತ ಅವಿನಾಶ ಭಟ್‌ ಪೆರ್ಮುಖ ಅವರ ದೇಶದ ಕುರಿತಾದ ಗೀತೆ ಮತ್ತು ಶ್ರೀಮತಿ ನಳಿನಿ ವಿಜಯಕುಮಾರ್‌ ಅವರ ಆಧ್ಯಾತ್ಮದ ಛಾಯೆಯ ಸಮರ್ಪಣಾ ಬಾವದ ಕವಿತೆಯನ್ನು ಶ್ರೀ ವೆಂಕಟೇಶ್‌ ಮನುರವರು ಹಾಡಿದರು. ಡಾ. ಸೂರ್ಯ ಹೆಬ್ಬಾರ್‌ರವರ ಕಾಳಿದಾಸನ ಕುರಿತಾದ ಗೀತೆ ಮತ್ತು ಶ್ರೀಮತಿ ವೀಣಾ ರವಿಕುಮಾರ್‌ರವರ ಜೋಡಿ ಹಕ್ಕಿಗಳ ಪ್ರೀತಿ ಕವಿತೆ ಮಂಜುಳಾ ಮರಾಠೆಯವರು ಹಾಡಿದರು. ಕೊನೆಯ ದಾಗಿ ಶ್ರೀ ಚಂದ್ರ ಶೇಖರ್‌ರವರ ಶ್ರೀನಿವಾಸನ ಕುರಿತಾದ ಭಕ್ತಿ ಗೀತೆ ಹಾಗೂ ಶ್ರೀಮತಿ ಮೇಧಾ ಪ್ರಹ್ಲಾದಾಚಾರ್‌ ಜೋಶಿಯವರ ಎಲ್ಲವೂ ಭಗವಂತನ ಕೈಯಲ್ಲಿದೇ ಎಂಬ ದಾಸ್ಯಭಾವದ ಹಾಡನ್ನು ಶ್ರೀಮತಿ ಸಂಧ್ಯಾ ಇವರು ಸೊಗಸಾಗಿ ಹಾಡಿದರು. ಪ್ರಾರ್ಥನೆಯನ್ನು ಗಮಕಿ ಶ್ರೀಮತಿ ಸಂ‍ಧ್ಯಾ ರಮೇಶ್‌ರವರು ಹಾಡಿದರು, ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀಯುತ ಎಮ್‌ಎಸ್‌ ನರಸಿಂಹಮೂರ್ತಿಯವರು ಕೆಎಸ್‌ ನರಸಿಂಹ ಸ್ವಾಮಿಯವರ ತೆರೆದ ಬಾಗಿಲು ಕವಿತೆ ಮತ್ತು ಅವರ ಕವನ ಸಂಕಲನ ತೆರೆದ ಬಾಗಿಲಿನ ಕುರಿತು ಸೊಗಸಾಗಿ ಅದರ ಹಿನ್ನೆಲೆ ಮತ್ತು ಸಂದರ್ಭದ ಕುರಿತು ಹೇಳಿದರು.


ಸಭೆಯಲ್ಲಿ ಕೆ ಎಸ್‌ ನರಸಿಂಹ ಸ್ವಾಮಿಯವರ ಪುತ್ರ ಶ್ರೀ ಮಹಾಬಲರವರು, ಗಮಕ ಕಲಾ ಪರಿಷದ್‌ನ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ವಿಜಯ ಕುಮಾರ್‌ ಭರ್ತೂರು ಮಾಡಿದರು ಮತ್ತು ಶ್ರೀಯುತ ತಿಮ್ಮಣ್ಣ ಭಟ್ಟರು ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಭೆಗೆ ಸ್ವಾಗತವನ್ನು ಶ್ರೀಮತಿ ಮಾಧುರಿ ದೇಶಪಾಂಡೆಯವರು ಕೋರಿದರೆ ವಂದನಾರ್ಪಣೆಯನ್ನು ಶ್ರೀಮತಿ ಮೃದುಲಾ ವಿಜಯೀಂದ್ರ, ಮಹಿಳಾ ಪ್ರಕಾರದ ಉಪಾಧ್ಯಕ್ಷರು ಮಾಡಿದರು. ಕಾರ್ಯಕ್ರಮದ ನಂತರ ಲಘು ಉಪಹಾರದೊಂದಿಗೆ ಮುಕ್ತಾಯವಾಯಿತು.

ಕವಿ ಗಮಕಿಯಾಗಿರುವ ಶ್ರೀಮತಿ ಶಾಂತಾ ನಾಗಮಂಗಲರವರ ಈ ಪರಿಕಲ್ಪನೆಯ ಕಾರ್ಯಕ್ರಮ ವಿಶೇಷವಾಗಿ ನಡೆದು ಎಲ್ಲರ ಮನ ಸೂರೆ ಗೊಂಡಿತ್ತು. ಐವತ್ತಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಇಂದಿಗೂ ಸಾಹಿತ್ಯ ಮತ್ತು ಸಂಗೀತದ ಆಸಕ್ತಿಗೆ ಹಿಡಿದ ಕನ್ನಡಿಯಾಗಿತ್ತು.

Leave a Reply

Your email address will not be published. Required fields are marked *